New Banking batch admission

ಪ್ರೈಮ್ ಉಡುಪಿ : ಬ್ಯಾಂಕಿಂಗ್ ನೇಮಕಾತಿ ಪರೀಕ್ಷೆಗೆ ರಜಾ ದಿನದ ತರಬೇತಿ

ದೇಶದ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಯಶಸ್ವಿಯಾಗಿ ತರಬೇತಿ ನೀಡುತ್ತಿರುವ ಉಡುಪಿಯ ಪ್ರೈಮ್ ಸಂಸ್ಥೆಯು ಇದೀಗ ಮುಂದೆ ಪ್ರಕಟಣೆಗೊಳ್ಳಲಿರುವ ಐ.ಬಿ.ಪಿ.ಎಸ್, ಕರ್ನಾಟಕ ಬ್ಯಾಂಕ್ ಹಾಗೂ ಎಸ್.ಬಿ.ಐ ಕ್ಲರಿಕಲ್ ಮತ್ತು ಆಪೀಸರ್ಸ್ ನೇಮಕಾತಿ ಪರೀಕ್ಷೆಗಳಿಗೆ ಗುಣಮಟ್ಟದ ತರಬೇತಿ ನೀಡಿ ಗರಿಷ್ಟ ಫಲಿತಾಂಶ ಗಳಿಸುವ ನಿಟ್ಟಿನಲ್ಲಿ ಹಿರಿಯ ಪ್ರಾಧ್ಯಾಪಕ ವೃಂದ ಮತ್ತು ಅನುಭವೀ ಉಪನ್ಯಾಸಕರುಗಳ ನೇತ್ರತ್ವದಲ್ಲಿ ಇದೇ ಬರುವ ನಂ. 20 ರಿಂದ ದೈನಂದಿನ (ವೆಕೇಶನ್) ಬ್ಯಾಚುನ್ನು ಬ್ರಹ್ಮಗಿರಿಯ ಪ್ರೈಮ್ ಕೇಂದ್ರದಲ್ಲಿ ಆರಂಭಗೊಳಿಸಲಿದೆ.

200 ಗಂಟೆಗಳ ಈ ತರಬೇತಿಯು ಕಾಲೇಜು ಸೆಮಿಸ್ಟರ್ ಪರೀಕ್ಷೆ ಮುಗಿಸಿ ರಜೆಯಲ್ಲಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರಜಾ ದಿನದಲ್ಲಿ ಪ್ರತೀ ದಿನ ಬೆಳಿಗ್ಗೆ 9.00 ರಿಂದ 1.30 ಗಂಟೆಯವರೆಗೆ, ಕಾಲೇಜು ಪ್ರಾರಂಭಗೊಂಡ ನಂತರ ಪ್ರತೀ ಶನಿವಾರ ಮದ್ಯಾಹ್ನ 2.00 – 5.00 ರವರೆಗೆ ಮತ್ತು ಪ್ರತೀ ಬಾನುವಾರ ಬೆಳಿಗ್ಗೆ 9.00 – 4.00 ಗಂಟೆಯವರೆಗೆ ನಡೆಯಲಿದ್ದು, 2019 ರ ಫೆಬ್ರವರಿ ತಿಂಗಳಿನಲ್ಲಿ ಅಂತ್ಯಗೊಳ್ಳಲಿದೆ.

ಈ ತರಬೇತಿ ಬ್ಯಾಂಕಿಂಗ್ ಪರೀಕ್ಷೆಯ ಮುಖ್ಯ ವಿಷಯಗಳಾದ ಅನಾಲಿಟಿಕಲ್ ಎಬಿಲಿಟಿ, ನ್ಯುಮೆರಿಕಲ್ ಎಬಿಲಿಟಿ, ವರ್ಬಲ್ ಎಬಿಲಿಟಿ, ಜನರಲ್ ನಾಲೇಜ್ ಮತ್ತು ಕಂಪ್ಯೂಟರ್ ಅವೇರ್ನಸ್ ಮುಂತಾದ ಬ್ಯಾಂಕಿಂಗ್ ಪರೀಕ್ಷೆಯ ಪಠ್ಯಕ್ರಮಗಳಿಗಣುಗುಣವಾಗಿ ಪರೀಕ್ಷೆಯ ಮೊದಲನೇ ಹಂತ ಪ್ರಿಲಿಮ್ಸ್ 3 ವಿಷಯಗಳನ್ನೊಳಗೊಂಡ 100 ಅಂಕಗಳ ಪತ್ರಿಕೆ ಹಾಗೂ ಎರಡನೇ ಹಂತದ ಮೈನ್ಸ್ 5 ವಿಷಯಗಳನ್ನೊಳಗೊಂಡ 200 ಅಂಕಗಳ ಪತ್ರಿಕೆಗಳಿಗೆ ಸಂಬಂದಿಸಿದಂತೆ ತರಗತಿಗಳು ನಡೆಯಲಿದೆ,

ಸಂಸ್ಥೆಯು ಈ ತರಬೇತಿಯಲ್ಲಿ ಉತ್ತಮ ಶಿಕ್ಷಕ ವ್ರಂದ, ಉತ್ತಮ ಗುಣಮಟ್ಟದ ಗ್ರಂಥಾಲಯ ವ್ಯವಸ್ಥೆ, ಅನ್ ಲೈನ್ ಪ್ರಾಕ್ಟೀಸ್  ಕಂಪ್ಯೂಟರ್ ಲ್ಯಾಬ್, ಅಂತರ್ಜಾಲ, ಪವರ್ ಪಾಯಿಂಟ್ ತರಬೇತಿ, ಬೇಸಿಕ್ ಮತ್ತು ಅಡ್ವಾನ್ಸ್ ಸ್ಟಡಿ ಬುಕ್ಸ್, 1 ವರ್ಷ ಅವಧಿಯ ಆನ್ ಲೈನ್ ಮೊಕ್ ಟೆಸ್ಟ್, ಮಾದರಿ ಪರೀಕ್ಷೆ ಮತ್ತು ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳಿಗೆ ಅಣುಕು ಸಂದರ್ಶನ ಇವು ಸಂಸ್ಥೆಯ ವಿಶೇಷತೆ.

ವಿದ್ಯಾರ್ಥಿಗಳ ವೃತ್ತಿಪರ ಜೀವನಕ್ಕೆ ಉಜ್ವಲ ಭವಿಷ್ಯವನ್ನು ಕಲ್ಪಿಸಿಕೊಡುವಲ್ಲಿ ಯಶಸ್ವಿಯಾಗಿರುವ ಕರಾವಳಿ ಕರ್ನಾಟಕದ ಸಂಸ್ಥೆ, ಈಗಾಗಲೇ ಸುಮಾರು 1280 ಕ್ಕೂ  ಅಧಿಕ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶವನ್ನು ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದೆ.

ಪದವೀಧರರು ಹಾಗೂ ಇದೀಗ ತಾನೇ ಪದವೀ ಪೂರೈಸುತ್ತಿರುವ ಅಭ್ಯರ್ಥಿಗಳು ಈ ರಜಾ ಅವಧಿಯ ತರಬೇತಿಯಲ್ಲಿ ಬಾಗವಹಿಸಿ ಮುಂಬರುವ ಬ್ಯಾಂಕಿಂಗ್, ರೈಲ್ವೆ, ಇನ್ಸೂರೆನ್ಸ್, ಪೋಸ್ಟಲ್, ಮೆಸ್ಕಾಂ, ಎಲ್.ಐ.ಸಿ. ಎಸ್.ಎಸ್.ಸಿ ಹಾಗೂ ಇನ್ನಿತರ ಯಾವುದೇ ಮಾದರಿಯ ಆಪ್ಟಿಟ್ಯೂಡ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಬಹುದಾಗಿದೆ.

ಇದೇ ಬರುವ  ನಂ. 20 ರಿಂದ ಪ್ರಾರಂಭವಾಗಲಿರುವ ಈ ನೂತನ ವೆಕೇಶನ್ ಬ್ಯಾಚಗೆ ಸೇರಬಯಸುವ ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಬ್ರಹ್ಮಗಿರಿ ಲಯನ್ಸ್ ಭವನದ ಹತ್ತಿರದ ಗ್ರೇಸ್ ಮೇನರ್ ಬಿಲ್ದಿಂಗ್ ನಲ್ಲಿರುವ ಪ್ರೈಮ್ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಸಂಸ್ಥೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.