Admission Open for New Batches

IMG-20201007-WA0150

 

ಪ್ರೈಮ್ ಉಡುಪಿ : ..ಎಸ್ / ಕೆ..ಎಸ್ ಪರೀಕ್ಷಾ ತರಬೇತಿ

ಭಾರತ ಸರಕಾರದ ಕೇಂದ್ರ ಲೋಕಸೇವಾ ಆಯೋಗ (UPSC) ಆಯೋಜಿಸುವ ನಾಗರಿಕ ಸೇವಾ “ಸಿವಿಲ್ ಸರ್ವೀಸಸ್” ಐ.ಎ.ಎಸ್ ಹಾಗೂ ಕರ್ನಾಟಕ ಲೋಕಸೇವಾ ಆಯೋಗ (KPSC) ಆಯೋಜಿಸುವ ಕೆ.ಎ.ಎಸ್ ಪರೀಕ್ಷೆಗೆ ತಯಾರಿ ನಡೆಸುವ ಅಭ್ಯರ್ಥಿಗಳಿಗಾಗಿ  2020 – 2021 ನೇ ಸಾಲಿನ ನೂತನ ಬ್ಯಾಚ್ ಉಡುಪಿ ಬ್ರಹ್ಮಗಿರಿಯ ಪ್ರೈಮ್ ಕೇಂದ್ರದಲ್ಲಿ ಇದೇ ಬರುವ  ಅ. 25 ರಿಂದ ಪ್ರಾರಂಭಗೊಳ್ಳಲಿದೆ.

ಈ ವೀಕೆಂಡ್ ತರಬೇತಿ ಮುಖ್ಯವಾಗಿ ಐ.ಎ.ಎಸ್/ಕೆ.ಎ.ಎಸ್ ಪರೀಕ್ಷೆಯ ಪಠ್ಯಕ್ರಮಗಳಿಗಣುಗುಣವಾಗಿ ಪ್ರಿಲಿಮಿನರಿ ಪರೀಕ್ಷೆಯ ಪೇಪರ್ 1 ಮತ್ತು ಪೇಪರ್ 2 ಪತ್ರಿಕೆಗಳಿಗೆ ಸಂಬಂದಿಸಿದದಂತೆ 5 ರಿಂದ 10 ನೇ ತರಗತಿವರೆಗಿನ ಬೇಸಿಕ್ ವಿಷಯಗಳಿಗೆ ಸಂಬಂದಪಟ್ಟ ಸಮಾಜ, ವಿಜ್ನಾನ, ಗಣಿತ ಮತ್ತು ಭಾಷಾ ವಿಷಯಗಳ ಪರಿಪೂರ್ಣ ಮಾಹಿತಿ, ಪ್ರಚಲಿತ ವಿದ್ಯಮಾನ ವಿಷಯಗಳಲ್ಲಿ ಬರುವ ಅತೀ ಮುಖ್ಯ ವಿಷಯಗಳಾದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆ, ಸಂವಿದಾನದ ಬೆಳವಣಿಗೆ, ಭಾರತದ ಆರ್ಥಿಕ ಅಭಿವ್ರದ್ದಿ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿನ ಆಗುಹೋಗುಗಳು, ಪ್ರತಿಷ್ಟಿತ ವ್ಯಕ್ತಿ, ಪ್ರಶಸ್ತಿಗಳು, ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಸಮ್ಮೇಳನ ಮತ್ತು ಜನರಲ್ ಸ್ಟಡೀಸ್ ಪತ್ರಿಕೆಯ ಮುಖ್ಯ ವಿಷಯಗಳಾದ ಇತಿಹಾಸ, ಅರ್ಥಶಾಸ್ತ್ರ, ಸಂವಿಧಾನ, ಭೂಗೋಳ, ವಿಜ್ನಾನ ಮತ್ತು ತಂತ್ರಜ್ನಾನ, ಪರಿಸರ, ಮೆಂಟಲ್ ಎಬಿಲಿಟಿ ಮತ್ತು ಗಣಿತ, ಸಾಂಪ್ರದಾಯಿಕ ಜ್ನಾನ, ಇಂಗ್ಲಿಷ್ ಹಾಗೂ ಮೈನ್ಸ್ ಪರೀಕ್ಷೆಯ ಎಸ್ಸೆ, ಎಥಿಕ್ಸ್ ಹಾಗೂ ಜನರಲ್ ನಾಲೇಜ್ ವಿಷಯಗಳಿಗೆ ಸಂಬಂದಿಸಿದಂತೆ 350 ಗಂಟೆಗಳ ಈ ತರಗತಿ ಪ್ರತೀ ಶನಿವಾರ ಮಧ್ಯಾಹ್ನ 2.30 – 5.30 ರವರೆಗೆ ಹಾಗೂ ಪ್ರತೀ ಬಾನುವಾರ ಬೆಳಿಗ್ಗೆ 9.00 – 5.30 ಗಂಟೆಯವರೆಗೆ ನಡೆಯಲಿದ್ದು 2021 ರ ಮೇ ತಿಂಗಳಿನಲ್ಲಿ ಅಂತ್ಯಗೊಳ್ಳಲಿದೆ.

ವೀಕೆಂಡ್ ನಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳು ವಾರದ ದಿನ (ಬೆ.9.30 ರಿಂದ ಸಾ.5.30) ಸೋಮವಾರದಿಂದ ಶುಕ್ರವಾರದವರೆಗೆ ತಮ್ಮ ಬಿಡುವಿನ ಸಮಯದಲ್ಲಿ ಪ್ರತೀ ದಿನ ಪ್ರೈಮ್ ಲೈಬ್ರೇರಿಯ ಯಾವುದಾದರೊಂದು ದಿನಪತ್ರಿಕೆಯಲ್ಲಿ ಬರುವ ಪ್ರಚಲಿತ ವಿದ್ಯಮಾನ, ಪ್ರಮುಖ ಸಂಪಾದಕೀಯ ವಿಷಯಗಳ ಟಿಪ್ಪಣಿ, ಗುಂಪು ಚರ್ಚೆ ಹಾಗೂ ಐ.ಎ.ಎಸ್ / ಕೆ.ಎ.ಎಸ್ ಪರೀಕ್ಷೆಗೆ ಸಂಬಂದಿಸಿದ ವಿದೇಶಿ ಲೇಖಕರು ಬರೆದ ವಿವಿಧ ಪುಸ್ತಕಗಳ ಗ್ರಂಥಾಲಯ ವ್ಯವಸ್ಥೆಯ ಸದೂಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.

ಅ. 25 ರಿಂದ ಆರಂಭಗೊಳ್ಳಲಿರುವ ಐ.ಎ.ಎಸ್/ಕೆ.ಎ.ಎಸ್ ಪರೀಕ್ಷಾ ತರಬೇತಿಗೆ ನೊಂದಾವಣಿ ಆರಂಭಗೊಂಡಿದ್ದು ಈ ತರಬೇತಿಗೆ ಸೇರಬಯಸುವ ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಪ್ರೈಮ್, ಗ್ರೇಸ್ ಮೇನರ್ ಬಿಲ್ದಿಂಗ್, ಲಯನ್ಸ್ ಭವನದ ಹತ್ತಿರ, ಬ್ರಹ್ಮಗಿರಿ, ಉಡುಪಿ

PH : 0820-4293422

ಇಲ್ಲಿಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ನಿರ್ಧೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

 

 

ಪ್ರೈಮ್ ಉಡುಪಿ : ಬ್ಯಾಂಕಿಂಗ್ ಪರೀಕ್ಷೆಗೆ ದೈನಂದಿನ ತರಬೇತಿ

ದೇಶದ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಯಶಸ್ವಿಯಾಗಿ ತರಬೇತಿ ನೀಡುತ್ತಿರುವ ಉಡುಪಿಯ ಪ್ರೈಮ್ ಸಂಸ್ಥೆಯು ಇದೀಗ ಮುಂದೆ ಪ್ರಕಟಣೆಗೊಳ್ಳಲಿರುವ ಐಬಿಪಿಎಸ್, ಎಸ್.ಬಿ.ಐ ಹಾಗೂ ಕರ್ನಾಟಕ ಬ್ಯಾಂಕ್ ಕ್ಲರಿಕಲ್ ಮತ್ತು ಆಪೀಸರ್ಸ್ ನೇಮಕಾತಿ ಪರೀಕ್ಷೆಗಳಿಗೆ ಹಿರಿಯ ಪ್ರಾಧ್ಯಾಪಕ ವೃ೦ಧ ಹಾಗೂ ಅನುಭವೀ ಉಪನ್ಯಾಸಕರುಗಳ ನೇತ್ರತ್ವದಲ್ಲಿ ದೈನಂದಿನ (ಆನ್ ಲೈನ್/ಆಫ್ ಲೈನ್) ಬ್ಯಾಚ್, ಉಡುಪಿ ಬ್ರಹ್ಮಗಿರಿಯ ಪ್ರೈಮ್ ಕೇಂದ್ರದಲ್ಲಿ ಇದೇ ಬರುವ ಅ. ೧೮ ರಿಂದ ಆರಂಭಗೊಳ್ಳಲಿದೆ.

ಈ ತರಬೇತಿಯು ಡಿಸಂಬರ್ ತಿಂಗಳಿನಲ್ಲಿ ನಡೆಯಲಿರುವ ಐಬಿಪಿಎಸ್ ಕ್ಲರಿಕಲ್ ಪರೀಕ್ಷೆಗೆ ಸಿದ್ದತೆ ನಡೆಸುವ  ಅಭ್ಯರ್ಥಿಗಳಿಗೆ ಹಾಗೂ ಇದೀಗ ತಾನೆ ಅಂತಿಮ ಹಂತದ ಸೆಮಿಸ್ಟರ್ ಪರೀಕ್ಷೆ ಮುಗಿಸಿ ರಜೆಯಲ್ಲಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ 200 ಗಂಟೆಗಳ ಈ ತರಗತಿಗಳು ಪ್ರತೀ ದಿನ ಬೆಳಿಗ್ಗೆ 9.00 ರಿಂದ 1.30 ಗಂಟೆಯವರೆಗೆ ನಡೆಯಲಿದ್ದು, ಡಿಸಂಬರ್ ತಿಂಗಳಿನಲ್ಲಿ ಅಂತ್ಯಗೊಳ್ಳಲಿದೆ.

ಈ ತರಬೇತಿ ಬ್ಯಾಂಕಿಂಗ್ ಪರೀಕ್ಷೆಯ ಮುಖ್ಯ ವಿಷಯಗಳಾದ ಅನಾಲಿಟಿಕಲ್ ಎಬಿಲಿಟಿ, ನ್ಯುಮೆರಿಕಲ್ ಎಬಿಲಿಟಿ, ವರ್ಬಲ್ ಎಬಿಲಿಟಿ, ಜನರಲ್ ನಾಲೇಜ್ ಮತ್ತು ಕಂಪ್ಯೂಟರ್ ಅವೇರ್ನಸ್ ಮುಂತಾದ ಬ್ಯಾಂಕಿಂಗ್ ಪರೀಕ್ಷೆಯ ಪಠ್ಯಕ್ರಮಗಳಿಗಣುಗುಣವಾಗಿ ಪರೀಕ್ಷೆಯ ಮೊದಲನೇ ಹಂತ ಪ್ರಿಲಿಮ್ಸ್ 3 ವಿಷಯಗಳನ್ನೊಳಗೊಂಡ 100 ಅಂಕಗಳ ಪತ್ರಿಕೆ ಹಾಗೂ ಎರಡನೇ ಹಂತದ ಮೈನ್ಸ್ 5 ವಿಷಯಗಳನ್ನೊಳಗೊಂಡ 200 ಅಂಕಗಳ ಪತ್ರಿಕೆಗಳಿಗೆ ಸಂಬಂದಿಸಿದಂತೆ ತರಗತಿಗಳು ನಡೆಯಲಿದೆ.

ಸಂಸ್ಥೆಯು ಈ ತರಬೇತಿಯಲ್ಲಿ ಉತ್ತಮ ಶಿಕ್ಷಕ ವೃಂದ, ಉತ್ತಮ ಗುಣಮಟ್ಟದ ಗ್ರಂಥಾಲಯ ವ್ಯವಸ್ಥೆ, ಅನ್ ಲೈನ್ ಪ್ರಾಕ್ಟೀಸ್ ಕಂಪ್ಯೂಟರ್ ಲ್ಯಾಬ್, ಅಂತರ್ಜಾಲ, ಪವರ್ ಪಾಯಿಂಟ್ ತರಬೇತಿ, ಬೇಸಿಕ್ ಮತ್ತು ಅಡ್ವಾನ್ಸ್ ಸ್ಟಡಿ ಬುಕ್ಸ್, 1 ವರ್ಷ ಅವಧಿಯ ಆನ್ ಲೈನ್ ಮೊಕ್ ಟೆಸ್ಟ್, ಮಾದರಿ ಪರೀಕ್ಷೆ ಮತ್ತು ಬ್ಯಾಂಕಿಂಗ್   ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳಿಗೆ ಅಣುಕು ಸಂದರ್ಶನ ಇವು ಸಂಸ್ಥೆಯ ವಿಶೇಷತೆ.

ಪದವೀಧರರು, ಸ್ನಾತಕೋತ್ತರ ಪದವೀಧರರು ಹಾಗೂ ಇದೀಗ ತಾನೇ ಪದವೀ ಪೂರೈಸುತ್ತಿರುವ ಅಭ್ಯರ್ಥಿಗಳು ಈ ರಜಾ ಅವಧಿಯ ತರಬೇತಿಯಲ್ಲಿ ಬಾಗವಹಿಸಿ ಮುಂಬರುವ ಬ್ಯಾಂಕಿಂಗ್, ರೈಲ್ವೆ, ಇನ್ಸೂರೆನ್ಸ್, ಪೋಸ್ಟಲ್, ಮೆಸ್ಕಾಂ, ಎಲ್.ಐ.ಸಿ. ಎಸ್.ಎಸ್.ಸಿ ಹಾಗೂ ಇನ್ನಿತರ ಯಾವುದೇ ಮಾದರಿಯ ಆಪ್ಟಿಟ್ಯೂಡ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಬಹುದಾಗಿದೆ.

ಇದೇ ಬರುವ ಅ. ೧೮ ರಿಂದ ಪ್ರಾರಂಭವಾಗಲಿರುವ ಈ ನೂತನ ವೆಕೇಶನ್ ಬ್ಯಾಚ್ ಗೆ ಸೇರಬಯಸುವ ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಪ್ರೈಮ್, ಗ್ರೇಸ್ ಮೇನರ್ ಬಿಲ್ದಿಂಗ್, ಲಯನ್ಸ್ ಭವನದ ಹತ್ತಿರ,  ಬ್ರಹ್ಮಗಿರಿ, ಉಡುಪಿ

PH : 0820-4293422

ಇಲ್ಲಿ ಸಂಪರ್ಕಿಸಬಹುದು ಎಂದು ಸಂಸ್ಥೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

 

 

IIPU + Banking ADD 2020

 

 

ಪ್ರೈಮ್ ಉಡುಪಿ : ಬ್ಯಾಂಕಿಂಗ್ ಪರೀಕ್ಷಾ ತರಬೇತಿ ಕಾರ್ಯಾಗಾರ

 

ಐ.ಎ.ಎಸ್, ಕೆ.ಎ.ಎಸ್, ಬ್ಯಾಂಕಿಂಗ್ ಹಾಗೂ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಯಶಸ್ವಿಯಾಗಿ ತರಬೇತಿ ನೀಡುತ್ತಿರುವ ಉಡುಪಿ ಪ್ರೈಮ್ ಸಂಸ್ಥೆಯು ಇದೀಗ 2020 ಮಾರ್ಚ್ ತಿಂಗಳಿನಲ್ಲಿ ನಡೆಯಲಿರುವ ಎಸ್.ಬಿ.ಐ. ಹಾಗೂ ಕರ್ನಾಟಕ ಬ್ಯಾಂಕ್ ಕ್ಲರಿಕಲ್ ಮತ್ತು ಆಫೀಸರ್ಸ್ ನೇಮಕಾತಿ ಪರೀಕ್ಷೆ ಹಾಗೂ ಜುಲೈ ತಿಂಗಳಿನಲ್ಲಿ ನಡೆಯಲಿರುವ ಐ.ಬಿ.ಪಿ.ಎಸ್ ಕ್ಲರಿಕಲ್ ಮತ್ತು ಆಫೀಸರ್ಸ್ ನೇಮಕಾತಿ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗಾಗಿ ಇದೇ ಬರುವ ಜ. ೨೫ ರಿಂದ ನೂತನ ವೀಕೆಂಡ್ ಬ್ಯಾಚ್ ತರಬೇತಿ ತರಗತಿಗಳು ಉಡುಪಿ ಕರಾವಳಿ ಬೈಪಾಸ್ ಬಳಿಯ ಪ್ರೈಮ್ ಕೇಂದ್ರದಲ್ಲಿ ಆರಂಭಗೊಳ್ಳಲಿದೆ.

ಇದರ ಪೂರ್ವಭಾವಿಯಾಗಿ ಕಳೆದ ಬಾನುವಾರದಂದು ಬ್ಯಾಂಕಿಂಗ್ ಪರೀಕ್ಷಾ ತರಬೇತಿಯ ಬಗ್ಗೆ ವಿಶೇಷ ಮಾಹಿತಿ ಕಾರ್ಯಾಗಾರ ಕಾರ್ಯಕ್ರಮ ನಡೆಸಲಾಯಿತು. ಸಂಪನ್ಮೂಲ ವ್ಯಕ್ತಿ  ಶ್ರಿ. ಮಂಜುನಾಥ್ ಇವರು ಬ್ಯಾಂಕಿಂಗ್ ನೇಮಕಾತಿ ಪರೀಕ್ಷೆಯ ಹೊಸ ಪಠ್ಯಕ್ರಮಗಳಿಗಣುಗುಣವಾಗಿ ನಡೆಯುವ ಬಹು ಆಯ್ಕೆಯ ಪ್ರಶ್ನೆಗಳನ್ನು ತ್ವರಿತವಾಗಿ ಹಾಗು ನಿಖರವಾಗಿ ಉತ್ತರಿಸುವ ಬಗ್ಗೆ ಹಾಗು ಪರೀಕ್ಷಾ ಸಮಯದ ಅಭಾವ – ಅದರ ಸದ್ಬಳಕೆ ಮೂಲಕ ಗರಿಷ್ಠ ಅಂಕ ಗಳಿಸಲು ಅನುಸರಿಸುವ ರೀತಿ ನೀತಿ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು.

ಇದರ ಮುಂದುವರಿದ ಭಾಗವಾಗಿ ಜ. ೨೫ ರಿಂದ 200 ಗಂಟೆಗಳ ಈ ತರಬೇತಿಯು ಪ್ರಾರಂಭಗೊಳ್ಳಲಿದ್ದು , ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರತೀ  ಶನಿವಾರ ಮದ್ಯಾಹ್ನ  2.00 – 5.00 ರವರೆಗೆ ಮತ್ತು ಪ್ರತೀ ಬಾನುವಾರ ಬೆಳಿಗ್ಗೆ 9.00 – 4.00 ಗಂಟೆಯವರೆಗೆ ನಡೆಯಲಿದ್ದು, 2020 ರ ಜೂನ್ ತಿಂಗಳಿನಲ್ಲಿ ಅಂತ್ಯಗೊಳ್ಳಲಿದೆ.

ಈ ತರಬೇತಿಯು ಮುಖ್ಯವಾಗಿ ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಪರೀಕ್ಷಾರ್ಥಿಗಳಿಗೆ ಸವಾಲಾಗಿರುವ ಮ್ಯಾಥ್ಸ್, ರೀಸನಿಂಗ್ ವಿಭಾಗದ ಪ್ರಶ್ನಾವಳಿಗಳನ್ನು ಸೂಕ್ತವಾಗಿ, ನಿಖರವಾಗಿ ನಿಭಾಯಿಸಲು ಹಾಗೂ ಕನಿಷ್ಠ ಅವಧಿಯಲ್ಲಿ ಗರಿಷ್ಠ ಪ್ರಶ್ನೆಗಳನ್ನು ಉತ್ತರಿಸಲು ಸಹಕರಿಸುವ ನಿಮಿತ್ತ ಶಾರ್ಟ್ ಕಟ್ ಮತ್ತು ವೇದಿಕ್ ಮ್ಯಾಥ್ಸ್ ತರಬೇತಿ, ಇಂಗ್ಲಿಷ್ ವಿಷಯದ ಅತ್ಯಂತ ಕ್ಲಿಷ್ಟಕರವಾದ ಕಾಂಪ್ರೆಹೆನ್ಸನ್,ವಕೇಬುಲರಿ,ವ್ಯಾಕರಣ ಪ್ರಯೋಗಗಳ ಬಗ್ಗೆ ಮಾರ್ಗದರ್ಶನ, ಪ್ರಚಲಿತ ವಿದ್ಯಮಾನ, ಬ್ಯಾಂಕಿಂಗ್ ಸಂಬಂದಪಟ್ಟ ವಿಷಯ ಮತ್ತು ವ್ಯಾಖ್ಯಾನಗಳ ಬಗ್ಗೆ ಮಾಹಿತಿ, ಕಂಪ್ಯೂಟರ್, ಆನ್ ಲೈನ್ ಪರೀಕ್ಷೆಗೆ ಪವರ್ ಪಾಯಿಂಟ್ ತರಬೇತಿ, ಮಾದರಿ ಪರೀಕ್ಷೆ ಹಾಗೂ ಸಂದರ್ಶನ, ವಿದೇಶಿ ಲೇಖಕರು ಬರೆದ ಗುಣಮಟ್ಟದ ಗ್ರಂಥಾಲಯ ವ್ಯವಸ್ಥೆ ಇವುಗಳನ್ನು ಅಭ್ಯರ್ಥಿಗಳಿಗೆ ಒದಗಿಸಲಾಗುವುದು.

ಪದವೀಧರರು, ಸ್ನಾತಕೋತ್ತರ ಪದವೀಧರರು ಹಾಗೂ ಇದೀಗ ತಾನೇ ಪದವೀ ಪಡೆಯುತ್ತಿರುವ ಅಭ್ಯರ್ಥಿಗಳು ಈ ತರಬೇತಿಯಲ್ಲಿ ಬಾಗವಹಿಸಿ ಮುಂಬರುವ ಬ್ಯಾಂಕಿಂಗ್ ಪರೀಕ್ಷೆ ಮಾತ್ರವಲ್ಲದೆ ಇನ್ನಿತರ ಆಪ್ಟಿಟ್ಯೂಡ್ ಮಾದರಿಯ ಸ್ಪರ್ಧಾತ್ಮಕ ಪರೀಕ್ಷೆಗಳಾದ ರೈಲ್ವೆ, ಇನ್ಸೂರೆನ್ಸ್, ಪೋಸ್ಟಲ್, ಮೆಸ್ಕಾಂ, ಎಲ್.ಐ.ಸಿ. ಎಸ್.ಎಸ್.ಸಿ ಮುಂತಾದ ಪರೀಕ್ಷೆಗಳಿಗೂ ತಯಾರಿ ನಡೆಸಬಹುದಾಗಿದೆ.

ಎಸ್.ಬಿ.ಐ. ಕ್ಲರಿಕಲ್ ಹುದ್ದೆಗೆ 20 ರಿಂದ 28 ವರ್ಷ ತುಂಬಿದ ಯಾವುದೇ ಪದವಿ ಪೂರೈಸಿದ ಅಭ್ಯರ್ಥಿಗಳು ತಾ. 26-01-2020 ರ ಒಳಗೆ www.sbi.co.in/careers ನಲ್ಲಿ ಆನ್ ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಇದೇ ಬರುವ ಜ. ೨೫ ರಿಂದ ಪ್ರಾರಂಭವಾಗಲಿರುವ ಈ ನೂತನ ವೀಕೆಂಡ್ ಬ್ಯಾಚಗೆ ಸೇರಬಯಸುವ ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಉಡುಪಿ ಕರಾವಳಿ ಬೈಪಾಸ್ ಬಳಿಯ ರೀಗಲ್ ನೆಸ್ಟ್ ಕಟ್ಟಡದಲ್ಲಿರುವ ಪ್ರೈಮ್ ಕಚೇರಿ ಅಥವಾ ಬ್ರಹ್ಮಗಿರಿ ಲಯನ್ಸ್ ಭವನದ ಹತ್ತಿರದ ಗ್ರೇಸ್ ಮೇನರ್ ಬಿಲ್ದಿಂಗ್ ನಲ್ಲಿರುವ ಪ್ರೈಮ್ ಕಚೇರಿನ್ನು (೦೮೨೦-೪೨೯೩೪೨೨, ೯೨೪೩೩೧೩೬೩೨)   ಸಂಪರ್ಕಿಸಬಹುದು ಎಂದು ಸಂಸ್ಥೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

 

 

 

ಪ್ರೈಮ್ : ಬ್ಯಾಂಕಿಂಗ್ನೇಮಕಾತಿಮಾದರಿಸಂದರ್ಶನಕಮ್ಮಟ

ಉಡುಪಿಪ್ರೈಮ್ಸಂಸ್ಥೆಯುಕರ್ಣಾಟಕಬ್ಯಾಂಕ್ನಡೆಸಿದಕ್ಲರಿಕಲ್ಹುದ್ದೆಯಲಿಖಿತಪರೀಕ್ಷೆಯಲ್ಲಿತೇರ್ಗಡೆಹೊಂದಿದಪ್ರೈಮ್ನ33ಅಭ್ಯರ್ಥಿಗಳಿಗೆಮುಂದಿನಹಂತದವ್ಯಯಕ್ತಿಕಸಂದರ್ಶನಪರೀಕ್ಷೆಯನ್ನುಸಮರ್ಥವಾಗಿಹಾಗೂಯಶಸ್ವಿಯಾಗಿಎದುರಿಸಲುಬೇಕಾದಮಾರ್ಗದರ್ಶನಕಾರ್ಯಾಗಾರಕಾರ್ಯಕ್ರಮಉಡುಪಿಬ್ರಹ್ಮಗಿರಿಯಪ್ರೈಮ್ಕೇಂದ್ರದಲ್ಲಿಏರ್ಪಡಿಸಲಾಯಿತು.

ಅಂದುಬೆಳಿಗ್ಗೆನಡೆದಮಾದರಿಸಂದರ್ಶನಾಕಮ್ಮಟದಲ್ಲಿಹಿರಿಯಸಂಪನ್ಮೂಲವ್ಯಕ್ತಿಶ್ರೀಗುರುಪ್ರಸಾದ್, ಶ್ರೀ.ಶೈಲೇಸ್, ಶ್ರೀಎ.ಪಿ.ಭಟ್ಇವರುಬಾಗವಹಿಸಿದರು.

9.00ಗಂಟೆಗೆಪ್ರಾರಂಭವಾದಈಕಾರ್ಯಕ್ರಮದಲ್ಲಿಮೊದಲಿಗೆಸಂದರ್ಶನದಲ್ಲಿಯಶಸ್ಸುಗಳಿಸಲುನೆರವಾಗುವಕೌಶಲಗಳವಿವರಹಾಗೂಯಶಸ್ವೀಸಂದರ್ಶನದಲಕ್ಷಣಗಳಬಗ್ಗೆಮಾಹಿತಿನೀಡಿದರು. ತದನಂತರಪ್ರತೀಅಭ್ಯರ್ಥಿಗಳಿಗೂ30ನಿಮಿಷದಮೋಕ್ಇಂಟರ್ವ್ಯೂನಡೆಸಲಾಯಿತು.ಅದರಲ್ಲಿಸಾಮಾನ್ಯವಾಗಿಸಂದರ್ಶನದಲ್ಲಿಕೇಳಲಾಗುವಅಭ್ಯರ್ಥಿಗಳಸ್ವ-ವಿವರ, ಅಭ್ಯರ್ಥಿಗಳಜಿಲ್ಲೆ, ಶೈಕ್ಷಣಿಕವಿಷಯ, ನೇಮಕಗೊಳ್ಳುವಇಲಾಖೆ, ಪ್ರಚಲಿತವಿಷಯ, ಸಾಮಾನ್ಯಜ್ನಾನ, ತಾರ್ಕಿಕಹಾಗೂಇತರವಿಷಯಗಲಿಗೆಸಂಬದಪಟ್ಟಪ್ರಶ್ನೆಗಳನ್ನುಕೇಳಲಾಯಿತು.ಹಾಗೆನೇಪ್ರತೀಯೊಬ್ಬರಸಂದರ್ಶನಮುಗಿದಬಳಿಕಅವರಿಗೆಕೇಳಲಾದಪ್ರಶ್ನೆಗಳಕ್ರಿಯಾತ್ಮಕಪ್ರತ್ಯುತ್ತರದಬಗ್ಗೆಮಾಹಿತಿನೀಡಿ, ಮಾದರಿಸಂದರ್ಶನಾಅಧ್ಯಯನಸಾಮಗ್ರಿಯನ್ನುನೀಡಲಾಯಿತು.

ಸಂಸ್ಥೆಯಲ್ಲಿಈವರೆಗೆತರಬೇತಿಪಡೆದ1280ಕ್ಕೂಹೆಚ್ಚುಅಭ್ಯರ್ಥಿಗಳುಬ್ಯಾಂಕಿಂಗ್ಹಾಗೂಇನ್ನಿತರಕ್ಷೇತ್ರಗಳಲ್ಲಿಉನ್ನತಹುದ್ದೆಯನ್ನುಅಲಂಕರಿಸಿರುವುದುಪ್ರೈಮ್ಸಂಸ್ಥೆಯಗುಣಮಟ್ಟದತರಬೇತಿಗೆನಿದರ್ಶನವಾಗಿದೆ. ಪ್ರಸ್ತುತ3ಬ್ಯಾಚುಗಳಲ್ಲಿಬ್ಯಾಂಕಿಂಗ್ತರಬೇತಿಆರಂಭಗೊಂಡಿದ್ದು, ಮುಂಬರುವಐಬಿಪಿಎಸ್ಆಫೀಸರ್ಸ್ಮತ್ತುಕ್ಲರಿಕಲ್ನೇಮಕಾತಿಪರೀಕ್ಷೆಗಳಿಗೆಅನುಭವೀಉಪನ್ಯಾಸಕರುಗಳನೇತ್ರತ್ವದಲ್ಲಿಇದೇಬರುವಆಗಸ್ಟ್25ರಿಂದನೂತನದೈನಂದಿನಬ್ಯಾಚ್ಆರಂಭಗೊಳ್ಳಲಿದೆ.ಆಸಕ್ತರು ಹೆಚ್ಚಿನ ಮಾಹಿತಿಗೆ ಪ್ರೈಮ್, ಗ್ರೇಸ್ ಮೇನರ್ ಬಿಲ್ದಿಂಗ್, ಲಯನ್ಸ್ ಭವನದ ಹತ್ತಿರ, ಬ್ರಹ್ಮಗಿರಿ ಕೇಂದ್ರ, ಉಡುಪಿ

PH : 0820 – 4293422,   Mob : 9243313632

ಇಲ್ಲಿಗೆ ಸಂಪರ್ಕಿಸಬಹುದು ಎಂದು ಸಂಸ್ಥೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

 

 

PRIME Karnataka bank Mock interview 2019


ಪ್ರೈಮ್ ಉಡುಪಿ : ಐಬಿಪಿಎಸ್ ಬ್ಯಾ೦ಕಿ೦ಗ್ ಪರೀಕ್ಷಾ ತರಬೇತಿ ಆಗಸ್ಟ್ 29 ರಿಂದ ಆರಂಭ

ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐ.ಬಿ.ಪಿ.ಎಸ್) ಆಯೋಜಿಸುವ ಬ್ಯಾಂಕ್ ಆಪೀಸರ್ ಮತ್ತು ಕ್ಲರಿಕಲ್ ಹುದ್ದೆಗಳ ನೇಮಕಕ್ಕೆ ಐಬಿಪಿಎಸ್ ಸಂಸ್ಥೆಯು ಅಧಿಸೂಚನೆ ಹೊರಡಿಸಿದ್ದು, , ಈ ನೇಮಕಾತಿ ಪರೀಕ್ಷೆಗೆ ಇದೇ ಬರುವ ಆಗಸ್ಟ್ 29 ರಿಂದ ದೈನಂದಿನ ತರಬೇತಿ ತರಗತಿಗಳು ಉಡುಪಿ ಬ್ರಹ್ಮಗಿರಿಯ ಪ್ರೈಮ್ ಕೇಂದ್ರದಲ್ಲಿ ಆರಂಭಗೊಳ್ಳಲಿದೆ.

ಇದರ ಪೂರ್ವಭಾವಿಯಾಗಿ ಕಳೆದ ಬಾನುವಾರದಂದು ಬ್ಯಾಂಕಿಂಗ್ ಪರೀಕ್ಷಾ ತರಬೇತಿಯ ಬಗ್ಗೆ ವಿಶೇಷ ಮಾಹಿತಿ ಕಾರ್ಯಾಗಾರ ಕಾರ್ಯಕ್ರಮ ನಡೆಸಲಾಯಿತು. ಸಂಪನ್ಮೂಲ ವ್ಯಕ್ಥಿಗಳಾಗಿ ಶ್ರೀ ಚೇತನ್ ಪ್ರಭು ಇವರು ಬ್ಯಾ೦ಕಿಂಗ್ ನೇಮಕಾತಿ ಪರೀಕ್ಷೆಯ ಹೊಸ ಪಠ್ಯಕ್ರಮಗಳಿಗಣುಗುಣವಾಗಿ ಪ್ರಿಲಿಮಿನರಿ ಪರೀಕ್ಷೆಯಲ್ಲಿ ಬರುವ ರೀಸನಿಂಗ್, ಇಂಗ್ಲೀಷ್ ಹಾಗೂ ನ್ಯೂಮರಿಕಲ್ ಎಬಿಲಿಟಿಯ 100 ಅಂಕಗಳ ಪ್ರಶ್ನೆಯನ್ನು 60 ನಿಮಿಷಗಳಲ್ಲಿ ಉತ್ತರಿಸಲು ಬೇಕಾದ ಶಾರ್ಟ್ ಕಟ್ ಮೆಥಡ್ ಮತ್ತು ಮೈನ್ಸ್ ಪರೀಕ್ಷೆಯಲ್ಲಿ ಬರುವ 5 ವಿಷಯಗಳ 190 ಪ್ರಶ್ನೆಗಳನ್ನು ಅತೀ ಕಡಿಮೆ ಅವಧಿಯಲ್ಲಿ ತ್ವರಿತವಾಗಿ ಹಾಗೂ ನಿಖರವಾಗಿ 160 ನಿಮಿಷದಲ್ಲಿ ಉತ್ತರಿಸಲು ಬೇಕಾದ ಟೈಮ್ ಮೇನೇಜ್ಮ್ಂಟ್ ಮುಂತಾದ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.

ವಾರದ ಎಲ್ಲಾ ದಿನಗಳಲ್ಲಿ ನಡೆಯಲಿರುವ ಈ ತರಬೇತಿಯು ಪ್ರತೀ ಸೋಮವಾರದಿಂದ ಶನಿವಾರ ಸಾ. 5.00-6.30 ರವರೆಗೆ ಮತ್ತು ಪ್ರತೀ ಬಾನುವಾರ ಸಾ.3.30-6.30 ವರೆಗೆ 200 ಗಂಟೆಗಳ ಈ ತರಬೇತಿ ಐಬಿಪಿಎಸ್ ಬ್ಯಾಂಕಿಂಗ್ ಪ್ರಿಲಿಮಿನರಿ ಪರೀಕ್ಷೆಯ ರೀಸನಿಂಗ್, ಇಂಗ್ಲೀಷ್ ಮತ್ತು ಮ್ಯಾಥ್ಸ್, ಹಾಗೂ ಮೈನ್ಸ್ ಪರೀಕ್ಷೆಯ ರೀಸನಿಂಗ್, ಮ್ಯಾಥ್ಸ್, ಜನರಲ್ ನಾಲೇಜ್, ಇಂಗ್ಲೀಷ್ ಹಾಗೂ ಕಂಪ್ಯೂಟರ್ ಮುಂತಾದ ವಿಷಯಗಳಿಗೆ ಸಂಬಂದಿಸಿದಂತೆ ತರಗತಿಗಳು ನಡೆಯಲಿದ್ದು ಡಿಸಂಬರ್ ತಿಂಗಳಿನಲ್ಲಿ ಅಂತ್ಯಗೊಳ್ಳಲಿದೆ, ತದನಂತರ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳಿಗೆ ಉಚಿತ ಸಂದರ್ಶನ ಹಾಗೂ 1 ವರ್ಷ ಅವಧಿಯ ಆನ್ ಲೈನ್ ಮೊಕ್ ಟೆಸ್ಟ್ ಪ್ರೈಮ್ ಕಂಪ್ಯೂಟರ್ ಲ್ಯಾಬ್ ನಲ್ಲಿ ಉಚಿತವಾಗಿ ದೊರೆಯಲಿದೆ.

ಪದವೀದರರು, ಸ್ನಾತಕೋತ್ತರ ಪದವೀದರರು ಹಾಗೂ ಅಂತಿಮ ಹಂತದ ಪದವಿ ಪೂರೈಸುತ್ತಿರುವ ವಿದ್ಯಾರ್ಥಿಗಳು ಈ ತರಬೇತಿಯಲ್ಲಿ ಬಾಗವಹಿಸಿ ಮುಂದೆ ಬರಲಿರುವ ಬ್ಯಾಂಕಿಂಗ್, ರೈಲ್ವೆ, ಇನ್ಸೂರೆನ್ಸ್, ಪೋಸ್ಟಲ್, ಮೆಸ್ಕಾಂ ಹಾಗೂ ಇನ್ನಿತರ ಯಾವುದೇ ಆಪ್ಟಿಟ್ಯೂಡ್ ಮಾದರಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಬಹುದಾಗಿದೆ.

ಐಬಿಪಿಎಸ್ ಪಿ.ಓ. ಹುದ್ದೆಗೆ 20 ರಿಂದ 30 ವರ್ಷ ತುಂಬಿದ ಯಾವುದೇ ಪದವಿ ಪೂರೈಸಿದ ಅಭ್ಯರ್ಥಿಗಳು ತಾ. 28-08-2019 ರ ಒಳಗೆ www.ibps.in ನಲ್ಲಿ, ಆನ್ ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಇದೇ ಬರುವ ಆಗಸ್ಟ್ 29 ರಿಂದ ಆರಂಭಗೊಳ್ಳಲಿರುವ ಬ್ಯಾಂಕಿಂಗ್ ನೇಮಕಾತಿ ಪರೀಕ್ಷಾ ತರಬೇತಿಯ ಡೈಲಿ ಇವ್ನಿಂಗ್ ಬ್ಯಾಚ್ ಗೆ ಸೇರಬಯಸುವ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಪ್ರೈಮ್, ಗ್ರೇಸ್ ಮೇನರ್ ಬಿಲ್ದಿಂಗ್, ಲಯನ್ಸ್ ಭವನದ ಹತ್ತಿರ, ಬ್ರಹ್ಮಗಿರಿ ಕೇಂದ್ರ, ಉಡುಪಿ ಇಲ್ಲಿ ಸಂಪರ್ಕಿಸಬಹುದು ಎಂದು ಸಂಸ್ಥೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Employment Bank Batch Daily 2019

 


 

 

IAS BATCH Innauguration 2020ಪ್ರೈಮ್ ಉಡುಪಿ : ..ಎಸ್ / ಕೆ..ಎಸ್ ತರಬೇತಿ ತರಗತಿ ಉದ್ಘಾಟಣೆ

ಉಡುಪಿ ಪ್ರೈಮ್ ಸಂಸ್ಥೆಯ 2019-20 ನೇ ಸಾಲಿನ ಐ.ಎ.ಎಸ್ / ಕೆ..ಎಸ್ ತರಬೇತಿಯ ನೂತನ ಬ್ಯಾಚನ್ನು ಡಾ. ಯತೀಶ್ ಉಲ್ಲಾಲ್, 7th Rank KAS-2017 ಇವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಉಡುಪಿ ಬ್ರಹ್ಮಗಿರಿಯ ಪ್ರೈಮ್ ಸಂಸ್ಥೆಯ ಸಭಾಂಗಣದಲ್ಲಿ ಕಳೆದ ಬಾನುವಾರದಂದು ಜರಗಿದ ಈ ಕಾರ್ಯಕ್ರಮದಲ್ಲಿ ಸಮಾರಂಭದ ಮುಖ್ಯ ಅಥಿತಿಗಳಾಗಿ ಆಗಮಿಸಿದ ಪ್ರಸ್ತುತ ದಾವಣಗೆರೆ, ತುಮಕೂರು ರೈಲ್ವೇ ವಿಭಾಗದ ಭೂಸ್ವಾದೀನ ಅಧಿಕಾರಿ ಡಾ. ಯತೀಶ್ ಉಲ್ಲಾಲ್ ಇವರು ಐ.ಎ.ಎಸ್/ ಕೆ.ಎ.ಎಸ್ ಆಕಾಂಕ್ಷಿಗಳನ್ನು ಉದ್ದೇಶಿಸಿ ಮಾತನಾಡಿ ನಾಗರಿಕ ಸೇವಾ ಪರೀಕ್ಷೆ (Civil Services Exam) ಯ ಮಹತ್ವ ಮತ್ತು ಜವದ್ಬಾರಿಗಳ ಕುರಿತು ಪ್ರಸ್ತಾಪಿಸಿ ಇಂದು ಸಾಮಾನ್ಯರಲ್ಲಿ ಸಿವಿಲ್ ಸರ್ವೀಸಸ್ ಅಧಿಕಾರಿಗಳ ಕಾರ್ಯವೈಖರಿಗಳ ಬಗ್ಗೆ ಇರುವ ಅನುಮಾನಗಳನ್ನು ತನ್ನ ಅನುಭವಪೂರ್ಣ ವಿಚಾರಗಳೊಂದಿಗೆ ವಿಮರ್ಶಿಸಿದರಲ್ಲದೆ, ಐ.ಎ.ಎಸ್/ ಕೆ..ಎಸ್ ಪರೀಕ್ಷೆಯನ್ನು ಎದುರಿಸಲು ಅಭ್ಯರ್ಥಿಗಳಲ್ಲಿ ಇರಬೇಕಾದ ಛಲ, ಏಕಾಗ್ರತೆ, ನಿರಂತರ ಅಧ್ಯಯನ ಶೀಲತೆ, ದೃಡ ನಿಶ್ಚಯ, ವಿವಿಧ ವಿಷಯಗಳ ವಿಸ್ತೃತ ಜ್ಞಾನ, ಮತ್ತು ಸಾಮಾಜಿಕ ವಿದ್ಯಮಾನಗಳ ವಿವಿಧ ಆಯಾಮಗಳ ಅರಿವು ಮುಂತಾದವುಗಳ ಕುರಿತು ಮಾಹಿತಿ ಮತ್ತು ಐ.ಎ.ಎಸ್/ ಕೆ..ಎಸ್ ಪರೀಕ್ಷೆಯನ್ನು ಎದುರಿಸಲು ಅಭ್ಯರ್ಥಿಗಳು ಯಾವ ರೀತಿ ತಯಾರಿ ನಡೆಸಬೇಕೆಂಬುದನ್ನು ಸವಿಸ್ತಾರವಾಗಿ ವಿವರಿಸಿದರು.

ಸಂಸ್ಥೆಯ ನಿರ್ದೇಶಕರಾದ ಪ್ರೊ. ರಾಧಾಕೃಷ್ಣ ಆಚಾರ್ಯ ಅತಿಥಿಗಳಿಗೆ ಹೂ ಗುಚ್ಚ ನೀಡಿ ಸ್ವಾಗತಿಸಿದರು, ಪ್ರೋ. ಗೋಪಾಲಕೃಷ್ಣ ಸಾಮಗ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು, ಕರ್ಣಾಟಕ ಬ್ಯಾಂಕಿನ ನಿವೃತ್ತ ಪ್ರಬಂಧಕ ಶ್ರೀ ರಘುಪತಿ ರಾವ್, ಶಿಕ್ಷಣ ತಜ್ಣ ಶ್ರೀ. ಸುರೇಂದ್ರನಾಥ್ ಶೆಟ್ಟಿ, ಸಿ.ಕೆ. ಮಂಜುನಾಥ್, ಮುಂತಾದ ಗಣ್ಯರು ಈ ಸಭಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅಖಿಲೇಶ್, ಪರೀಕ್ಷಿತ್ ಭಾಗವಹಿಸಿದರು. ಲಕ್ಷ್ಮೀಶ  ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಈ ಕಾರ್ಯಕ್ರಮವನ್ನು ಶ್ರಿ. ಎಮ್. ಆರ್. ಪೈ ನಿರೂಪಿಸಿದರು ಹಾಗೂ ಶ್ರಿ ಎ.ಪಿ. ಕೊಡಂಚ ವಂದನಾರ್ಪಣೆಗೈದರು.

2019-20 ನೇ ಸಾಲಿನ ಐ.ಎ.ಎಸ್. ಬ್ಯಾಚ್ ಇದೇ ಬರುವ ಆಗಸ್ಟ್ 3 ರಂದು ಪ್ರಾರಂಭಗೊಳ್ಳಲಿದ್ದು, 500 ಗಂಟೆಗಳ ಈ ತರಬೇತಿ ಪ್ರತೀ ಶನಿವಾರ 2.30 – 5.30 ಗಂಟೆಯವರೆಗೆ ಹಾಗೂ ಪ್ರತೀ ಬಾನುವಾರ ಬೆಳಿಗ್ಗೆ 9.00 – 5.30 ಗಂಟೆಯವರೆಗೆ ನಡೆಯಲಿದ್ದು, 2020 ರ ಮೇ ತಿಂಗಳಿನಲ್ಲಿ ಅಂತ್ಯಗೊಳ್ಳಲಿದೆ. ಆಸಕ್ತರು ಹೆಚ್ಚಿನ ಮಾಹಿತಿಗೆ ಪ್ರೈಮ್, ಗ್ರೇಸ್ ಮೇನರ್ ಬಿಲ್ದಿಂಗ್, ಲಯನ್ಸ್ ಭವನದ ಹತ್ತಿರ, ಬ್ರಹ್ಮಗಿರಿ, ಉಡುಪಿ.  0820-4293422 ಇಲ್ಲಿಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

 

 

 

ಪ್ರೈಮ್ ಉಡುಪಿ : ಬ್ಯಾಂಕಿಂಗ್ ಪರೀಕ್ಷಾ ತರಬೇತಿಆರಂಭ

ಐ.ಎ.ಎಸ್, ಕೆ.ಎ.ಎಸ್, ಬ್ಯಾಂಕಿಂಗ್ ಹಾಗೂ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಯಶಸ್ವಿಯಾಗಿ ತರಬೇತಿ ನೀಡುತ್ತಿರುವ ಉಡುಪಿ ಪ್ರೈಮ್ ಸಂಸ್ಥೆಯು ಇದೀಗ 2019 ರಲ್ಲಿ ನಡೆಯಲಿರುವಐ.ಬಿ.ಪಿ.ಎಸ್, ಎಸ್.ಬಿ.ಐ. ಹಾಗೂ ಕರ್ನಾಟಕ ಬ್ಯಾಂಕ್ ಕ್ಲರಿಕಲ್ ಮತ್ತು ಆಫೀಸರ್ಸ್ ನೇಮಕಾತಿ ಪರೀಕ್ಷೆಗಳಿಗೆತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗಾಗಿಇದೇ ಬರುವ ಆಗಸ್ಟ್3 ರಿಂದ ನೂತನ ವೀಕೆಂಡ್ಬ್ಯಾಚ್ತರಬೇತಿ ತರಗತಿಗಳು ಉಡುಪಿಕರಾವಳಿ ಬೈಪಾಸ್ ಬಳಿಯ ಪ್ರೈಮ್ ಕೇಂದ್ರದಲ್ಲಿಆರಂಭಗೊಳ್ಳಲಿದೆ.

ಇದರಪೂರ್ವಭಾವಿಯಾಗಿಕಳೆದಶನಿವಾರದಂದುಬ್ಯಾಂಕಿಂಗ್ಪರೀಕ್ಷಾತರಬೇತಿಯಬಗ್ಗೆವಿಶೇಷ ಮಾಹಿತಿಕಾರ್ಯಾಗಾರಕಾರ್ಯಕ್ರಮನಡೆಸಲಾಯಿತು. ಸಂಪನ್ಮೂಲವ್ಯಕ್ಥಿಗಳಾಗಿಮಂಗಳೂರಿನಶೈಲೇಶ್ಇವರು ಬ್ಯಾ೦ಕಿಂಗ್ ನೇಮಕಾತಿ ಪರೀಕ್ಷೆಯ ಹೊಸ ಪಠ್ಯಕ್ರಮಗಳಿಗಣುಗುಣವಾಗಿ ಪ್ರಿಲಿಮಿನರಿಪರೀಕ್ಷೆಯಲ್ಲಿಬರುವರೀಸನಿಂಗ್,ಇಂಗ್ಲೀಷ್ಹಾಗೂನ್ಯೂಮರಿಕಲ್ಎವಿಲಿಟಿವಿಷಯಗಳ 100ಅಂಕಗಳಪ್ರಶ್ನೆಯನ್ನು1 ಗಂಟೆಯಅವಧಿಯಲ್ಲಿಉತ್ತರಿಸಲು ಬೇಕಾದ ಶಾರ್ಟ್ಕಟ್ಮೆಥಡ್ಮತ್ತುಮೈನ್ಸ್ಪರೀಕ್ಷೆಯಲ್ಲಿ ಬರುವ 5 ವಿಷಯಗಳ 200 ಪ್ರಶ್ನೆಗಳನ್ನು ಅತೀಕಡಿಮೆಅವಧಿಯಲ್ಲಿ ತ್ವರಿತವಾಗಿ ಹಾಗೂನಿಖರವಾಗಿ 2 ಗಂಟೆಯಲ್ಲಿಉತ್ತರಿಸಲುಬೇಕಾದಟೈಮ್ ಮೇನೇಜ್ಮ್ಂಟ್ಮುಂತಾದವಿಷಯಗಳಬಗ್ಗೆ ಮಾಹಿತಿ ನೀಡಿದರು.

ಇದರಮುಂದುವರಿದಭಾಗವಾಗಿಆಗಸ್ಟ್3ರಿಂದಪ್ರತೀ ಶನಿವಾರ ಮದ್ಯಾಹ್ನ 2.00-5.00 ರ ವರೆಗೆಮತ್ತು ಪ್ರತೀ ಬಾನುವಾರ ಬೆಳಿಗ್ಗೆ 9.00-4.00 ಗಂಟೆಯವರೆಗೆ 5ತಿಂಗಳಕಾಲಜರಗಲಿರುವ200 ಗಂಟೆಗಳ ಈ ತರಬೇತಿ 2019ರಡಿಸಂಬರ್ತಿಂಗಳಿನಲ್ಲಿಅಂತ್ಯಗೊಳ್ಳಲಿದೆ.ತದನಂತರ1ವರ್ಷಅವದಿಯಉಚಿತಆನ್ಲೈನ್ಮೊಕ್ಟೆಸ್ಟ್, ಹಾಗೂ ವಿಶೇಷ ಗುಣಮಟ್ಟದ ಗ್ರಂಥಾಲಯ ವ್ಯವಸ್ಥೆಯನ್ನುಅಭ್ಯರ್ಥಿಗಳಿಗೆಒದಗಿಸಲಾಗುವುದು.

ಪದವೀಧರರು, ಸ್ನಾತಕೋತ್ತರಪದವೀಧರರುಹಾಗೂಅಂತಿಮಹಂತದಪದವಿಪೂರೈಸುತ್ತಿರುವವಿದ್ಯಾರ್ಥಿಗಳು ಈ ತರಬೇತಿಯಲ್ಲಿಬಾಗವಹಿಸಿಮುಂದೆಬರಲಿರುವಬ್ಯಾಂಕಿಂಗ್ಪರೀಕ್ಷೆಮಾತ್ರವಲ್ಲದೆಇತರೆಆಪ್ಟಿಟ್ಯೂಡ್ಮಾದರಿಪರೀಕ್ಷೆಗಳಾದರೈಲ್ವೆ, ಇನ್ಸೂರೆನ್ಸ್, ಪೋಸ್ಟಲ್, ಮೆಸ್ಕಾಂಹಾಗೂಇನ್ನಿತರಯಾವುದೇಸ್ಪರ್ಧಾತ್ಮಕಪರೀಕ್ಷೆಗಳಿಗೆತಯಾರಿನಡೆಸಬಹುದಾಗಿದೆ.

ಆಗಸ್ಟ್3ರಿಂದ ಪ್ರಾರಂಭವಾಗಲಿರುವ ಈ ನೂತನ ವೀಕೆಂಡ್ ಬ್ಯಾಚಗೆ ಸೇರಬಯಸುವ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಕರಾವಳಿ ಬೈಪಾಸ್ ಬಳಿಯ ರೀಗಲ್ ನೆಕ್ಸ್ಟ್ ಕಟ್ಟಡದಲ್ಲಿರುವ ಪ್ರೈಮ್ ಕೇಂದ್ರ ಅಥವಾ ಬ್ರಹ್ಮಗಿರಿ ಲಯನ್ಸ್ ಭವನದ ಹತ್ತಿರದ ಗ್ರೇಸ್ ಮೇನರ್ ಬಿಲ್ದಿಂಗ್ ನಲ್ಲಿರುವ ಪ್ರೈಮ್ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಸಂಸ್ಥೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಪ್ರೈಮ್ ಉಡುಪಿ : ಬ್ಯಾಂಕಿಂಗ್ ನೇಮಕಾತಿ ಪರೀಕ್ಷೆಗೆ ರಜಾ ದಿನದ ತರಬೇತಿ

ದೇಶದ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಯಶಸ್ವಿಯಾಗಿ ತರಬೇತಿ ನೀಡುತ್ತಿರುವ ಉಡುಪಿಯ ಪ್ರೈಮ್ ಸಂಸ್ಥೆಯು ಇದೀಗ ಮುಂದೆ ಪ್ರಕಟಣೆಗೊಳ್ಳಲಿರುವ ಐ.ಬಿ.ಪಿ.ಎಸ್, ಕರ್ನಾಟಕ ಬ್ಯಾಂಕ್ ಹಾಗೂ ಎಸ್.ಬಿ.ಐ ಕ್ಲರಿಕಲ್ ಮತ್ತು ಆಪೀಸರ್ಸ್ ನೇಮಕಾತಿ ಪರೀಕ್ಷೆಗಳಿಗೆ ಗುಣಮಟ್ಟದ ತರಬೇತಿ ನೀಡಿ ಗರಿಷ್ಟ ಫಲಿತಾಂಶ ಗಳಿಸುವ ನಿಟ್ಟಿನಲ್ಲಿ ಹಿರಿಯ ಪ್ರಾಧ್ಯಾಪಕ ವೃಂದ ಮತ್ತು ಅನುಭವೀ ಉಪನ್ಯಾಸಕರುಗಳ ನೇತ್ರತ್ವದಲ್ಲಿ ಇದೇ ಬರುವ ನಂ. 20 ರಿಂದ ದೈನಂದಿನ (ವೆಕೇಶನ್) ಬ್ಯಾಚುನ್ನು ಬ್ರಹ್ಮಗಿರಿಯ ಪ್ರೈಮ್ ಕೇಂದ್ರದಲ್ಲಿ ಆರಂಭಗೊಳಿಸಲಿದೆ.

200 ಗಂಟೆಗಳ ಈ ತರಬೇತಿಯು ಕಾಲೇಜು ಸೆಮಿಸ್ಟರ್ ಪರೀಕ್ಷೆ ಮುಗಿಸಿ ರಜೆಯಲ್ಲಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರಜಾ ದಿನದಲ್ಲಿ ಪ್ರತೀ ದಿನ ಬೆಳಿಗ್ಗೆ 9.00 ರಿಂದ 1.30 ಗಂಟೆಯವರೆಗೆ, ಕಾಲೇಜು ಪ್ರಾರಂಭಗೊಂಡ ನಂತರ ಪ್ರತೀ ಶನಿವಾರ ಮದ್ಯಾಹ್ನ 2.00 – 5.00 ರವರೆಗೆ ಮತ್ತು ಪ್ರತೀ ಬಾನುವಾರ ಬೆಳಿಗ್ಗೆ 9.00 – 4.00 ಗಂಟೆಯವರೆಗೆ ನಡೆಯಲಿದ್ದು, 2019 ರ ಫೆಬ್ರವರಿ ತಿಂಗಳಿನಲ್ಲಿ ಅಂತ್ಯಗೊಳ್ಳಲಿದೆ.

ಈ ತರಬೇತಿ ಬ್ಯಾಂಕಿಂಗ್ ಪರೀಕ್ಷೆಯ ಮುಖ್ಯ ವಿಷಯಗಳಾದ ಅನಾಲಿಟಿಕಲ್ ಎಬಿಲಿಟಿ, ನ್ಯುಮೆರಿಕಲ್ ಎಬಿಲಿಟಿ, ವರ್ಬಲ್ ಎಬಿಲಿಟಿ, ಜನರಲ್ ನಾಲೇಜ್ ಮತ್ತು ಕಂಪ್ಯೂಟರ್ ಅವೇರ್ನಸ್ ಮುಂತಾದ ಬ್ಯಾಂಕಿಂಗ್ ಪರೀಕ್ಷೆಯ ಪಠ್ಯಕ್ರಮಗಳಿಗಣುಗುಣವಾಗಿ ಪರೀಕ್ಷೆಯ ಮೊದಲನೇ ಹಂತ ಪ್ರಿಲಿಮ್ಸ್ 3 ವಿಷಯಗಳನ್ನೊಳಗೊಂಡ 100 ಅಂಕಗಳ ಪತ್ರಿಕೆ ಹಾಗೂ ಎರಡನೇ ಹಂತದ ಮೈನ್ಸ್ 5 ವಿಷಯಗಳನ್ನೊಳಗೊಂಡ 200 ಅಂಕಗಳ ಪತ್ರಿಕೆಗಳಿಗೆ ಸಂಬಂದಿಸಿದಂತೆ ತರಗತಿಗಳು ನಡೆಯಲಿದೆ,

ಸಂಸ್ಥೆಯು ಈ ತರಬೇತಿಯಲ್ಲಿ ಉತ್ತಮ ಶಿಕ್ಷಕ ವ್ರಂದ, ಉತ್ತಮ ಗುಣಮಟ್ಟದ ಗ್ರಂಥಾಲಯ ವ್ಯವಸ್ಥೆ, ಅನ್ ಲೈನ್ ಪ್ರಾಕ್ಟೀಸ್  ಕಂಪ್ಯೂಟರ್ ಲ್ಯಾಬ್, ಅಂತರ್ಜಾಲ, ಪವರ್ ಪಾಯಿಂಟ್ ತರಬೇತಿ, ಬೇಸಿಕ್ ಮತ್ತು ಅಡ್ವಾನ್ಸ್ ಸ್ಟಡಿ ಬುಕ್ಸ್, 1 ವರ್ಷ ಅವಧಿಯ ಆನ್ ಲೈನ್ ಮೊಕ್ ಟೆಸ್ಟ್, ಮಾದರಿ ಪರೀಕ್ಷೆ ಮತ್ತು ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳಿಗೆ ಅಣುಕು ಸಂದರ್ಶನ ಇವು ಸಂಸ್ಥೆಯ ವಿಶೇಷತೆ.

ವಿದ್ಯಾರ್ಥಿಗಳ ವೃತ್ತಿಪರ ಜೀವನಕ್ಕೆ ಉಜ್ವಲ ಭವಿಷ್ಯವನ್ನು ಕಲ್ಪಿಸಿಕೊಡುವಲ್ಲಿ ಯಶಸ್ವಿಯಾಗಿರುವ ಕರಾವಳಿ ಕರ್ನಾಟಕದ ಸಂಸ್ಥೆ, ಈಗಾಗಲೇ ಸುಮಾರು 1280 ಕ್ಕೂ  ಅಧಿಕ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶವನ್ನು ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದೆ.

ಪದವೀಧರರು ಹಾಗೂ ಇದೀಗ ತಾನೇ ಪದವೀ ಪೂರೈಸುತ್ತಿರುವ ಅಭ್ಯರ್ಥಿಗಳು ಈ ರಜಾ ಅವಧಿಯ ತರಬೇತಿಯಲ್ಲಿ ಬಾಗವಹಿಸಿ ಮುಂಬರುವ ಬ್ಯಾಂಕಿಂಗ್, ರೈಲ್ವೆ, ಇನ್ಸೂರೆನ್ಸ್, ಪೋಸ್ಟಲ್, ಮೆಸ್ಕಾಂ, ಎಲ್.ಐ.ಸಿ. ಎಸ್.ಎಸ್.ಸಿ ಹಾಗೂ ಇನ್ನಿತರ ಯಾವುದೇ ಮಾದರಿಯ ಆಪ್ಟಿಟ್ಯೂಡ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಬಹುದಾಗಿದೆ.

ಇದೇ ಬರುವ  ನಂ. 20 ರಿಂದ ಪ್ರಾರಂಭವಾಗಲಿರುವ ಈ ನೂತನ ವೆಕೇಶನ್ ಬ್ಯಾಚಗೆ ಸೇರಬಯಸುವ ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಬ್ರಹ್ಮಗಿರಿ ಲಯನ್ಸ್ ಭವನದ ಹತ್ತಿರದ ಗ್ರೇಸ್ ಮೇನರ್ ಬಿಲ್ದಿಂಗ್ ನಲ್ಲಿರುವ ಪ್ರೈಮ್ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಸಂಸ್ಥೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

 

Institute of Banking Personnel Selection Common Recruitment Process for ecruitment of Officers (Scale-I, II & III) and Office Assistant (Multipurpose) in Regional Rural Banks (RRBs) – CRP RRBs VII

Advt CRP RRB-VII-2018

 

BARODA CORPORATE CENTRE, MUMBAI
Admission to Baroda Manipal School of Banking

Bank of Baroda PO-2018-19.pdf-82

 

ಪ್ರೈಮ್ ಉಡುಪಿ : ಐಬಿಪಿಎಸ್ ಬ್ಯಾ೦ಕಿ೦ಗ್ ಪರೀಕ್ಷಾ ತರಬೇತಿ ಜೂನ್ 23 ರಿಂದ

ಬ್ಯಾ೦ಕಿ೦ಗ್ ಹಾಗೂ ಇನ್ನಿತರ ಉನ್ನತ ಕ್ಷೇತ್ರಗಳಲ್ಲಿ 1270 ಕ್ಕೂ ಮಿಕ್ಕಿ ಪದವೀಧರ ಯುವಕ ಯುವತಿಯರಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿಕೊಡುವಲ್ಲಿ ಯಶಸ್ವಿಯಾಗಿರುವ ಉಡುಪಿ ಪ್ರೈಮ್ ಸಂಸ್ಥೆಯು ಇದೀಗ ಐಬಿಪಿಎಸ್ ಆರ್ಆರ್ ಬಿ ಸಂಸ್ಥೆಯು ಆಯೋಜಿಸುವ 8561 ಆಪೀಸರ್ಸ್/ಕ್ಲರಿಕಲ್ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆಯನ್ನು ಆಗಸ್ಟ್/ ಸೆಪ್ಟಂಬರ್ ತಿಂಗಳಿನಲ್ಲಿ ನಡೆಸಲಿದ್ದು, ಈ ನೇಮಕಾತಿ ಪರೀಕ್ಷೆಗೆ ಇದೇ ಬರುವ ಜೂನ್ 23 ರಿಂದ ಉಡುಪಿ ಬ್ರಹ್ಮಗಿರಿಯ ಪ್ರೈಮ್ ಕೇಂದ್ರದಲ್ಲಿ ದೈನಂದಿನ ತರಬೇತಿ ತರಗತಿಗಳು ಆರಂಭಗೊಳ್ಳಲಿದೆ.

ಪ್ರತೀ ಸೋಮವಾರದಿಂದ ಶನಿವಾರ ಸಾ. 5.00-6.30 ರವರೆಗೆ ಮತ್ತು ಪ್ರತೀ ಬಾನುವಾರ ಸಾ. 3.30-6.30 ವರೆಗೆ ನಡೆಯಲಿರುವ 180 ಗಂಟೆಗಳ ಈ ತರಬೇತಿ ಐಬಿಪಿಎಸ್ ಆರ್ ಆರ್ ಬಿ ಬ್ಯಾಂಕಿಂಗ್ ಪರೀಕ್ಷೆಯ ಬದಲಾದ ಪಠ್ಯಕ್ರಮಗಳಿಗನುಗುಣವಾಗಿ ಮೊದಲನೇ ಹಂತ (ಪ್ರಿಲಿಮಿನರಿ) ಪರೀಕ್ಷೆಯ ರೀಸನಿಂಗ್ ಮತ್ತು ಮ್ಯಾಥ್ಸ್, ಹಾಗೂ ಎರಡನೇ ಹಂತದ (ಮೈನ್ಸ್) ಪರೀಕ್ಷೆಯ ರೀಸನಿಂಗ್, ಮ್ಯಾಥ್ಸ್, ಜನರಲ್ ನಾಲೇಜ್, ಇಂಗ್ಲೀಷ್ ಹಾಗೂ ಕಂಪ್ಯೂಟರ್  ತರಬೇತಿಯೊಂದಿಗೆ ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಪರೀಕ್ಷಾರ್ಥಿಗಳಿಗೆ ಸವಾಲಾಗಿರುವ ಮ್ಯಾಥ್ಸ್, ರೀಸನಿಂಗ್ ವಿಭಾಗದ ಪ್ರಶ್ನಾವಳಿಗಳನ್ನು ಸೂಕ್ತವಾಗಿ ನಿಭಾಯಿಸಲು ಮತ್ತು ಕನಿಷ್ಠ ಅವಧಿಯಲ್ಲಿ ಗರಿಷ್ಠ ಪ್ರಶ್ನೆಗಳನ್ನು ಉತ್ತರಿಸಲು ಸಹಕರಿಸುವ ವೇದಗಣಿತದ ಶಾರ್ಟ್ ಕಟ್ ಪ್ರಯೋಗ ಮುಂತಾದ ವಿಷಯಗಳಿಗೆ ಸಂಬಂದಿಸಿದಂತೆ ತರಗತಿಗಳು ನಡೆಯಲಿದ್ದು ಅಕ್ಟೋಬರ್ ತಿಂಗಳಿನಲ್ಲಿ ಅಂತ್ಯಗೊಳ್ಳಲಿದೆ,

ಪದವೀಧರರು ಹಾಗೂ ಅಂತಿಮ ಹಂತದ ಪದವಿ ಪೂರೈಸುತ್ತಿರುವ ವಿದ್ಯಾರ್ಥಿಗಳು ಈ ತರಬೇತಿಯಲ್ಲಿ ಬಾಗವಹಿಸಿ ಐಬಿಪಿಎಸ್ ಅರ್.ಅರ್.ಬಿ. ಪರೀಕ್ಷೆಗೆ ಮಾತ್ರವಲ್ಲದೆ ಮುಂದೆ ಬರಲಿರುವ ಬ್ಯಾಂಕಿಂಗ್, ರೈಲ್ವೆ, ಇನ್ಸೂರೆನ್ಸ್, ಪೋಸ್ಟಲ್, ಮೆಸ್ಕಾಂ ಹಾಗೂ ಇನ್ನಿತರ ಯಾವುದೇ ಆಪ್ಟಿಟ್ಯೂಡ್ ಮಾದರಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಬಹುದಾಗಿದೆ.

ಸಂಸ್ಥೆಯು ಈ ತರಬೇತಿಯಲ್ಲಿ ಉತ್ತಮ ಶಿಕ್ಷಕ ವ್ರಂದ, ಉತ್ಕ್ರುಷ್ಠ ಗುಣಮಟ್ಟದ ಗ್ರಂಥಾಲಯ ವ್ಯವಸ್ಥೆ, ಕಂಫ್ಯೂಟರ್, ಅಂತರ್ಜಾಲ, ಅನ್ ಲೈನ್ ಪರೀಕ್ಷೆಗೆ ಪವರ್ ಪಾಯಿಂಟ್ ತರಬೇತಿ, ಮಾದರಿ ಪರೀಕ್ಷೆ ಜೊತೆಗೆ ಅಭ್ಯರ್ಥಿಗಳಿಗೆ 1 ವರ್ಷ ಅವದಿಯ ಆನ್ ಲೈನ್ ಮೊಕ್ ಟೆಸ್ಟ್ ಮತ್ತು ಅದರ ಸೊಲ್ಯೂಶನ್, ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳಿಗೆ ಉಚಿತ ಸಂದರ್ಶನ ಇವು ಸಂಸ್ಥೆಯ ವಿಶೇಷತೆ.

ಐಬಿಪಿಎಸ್ ಆರ್ ಆರ್ ಬಿ ಕ್ಲರಿಕಲ್ ಹುದ್ದೆಗೆ 18 ರಿಂದ 28 ವರ್ಷ, ಆಫೀಸರ್ಸ್ ಹುದ್ದೆಗೆ 18 ರಿಂದ 30 ವರ್ಷ ತುಂಬಿದ ಯಾವುದೇ ಪದವಿ ಪೂರೈಸಿದ ಅಭ್ಯರ್ಥಿಗಳು ತಾ. 02-07-2018 ರ ಒಳಗೆ www.ibps.in ನಲ್ಲಿ, ಆನ್ ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಇದೇ ಬರುವ ಜೂನ್ 23 ರಿಂದ ಆರಂಭಗೊಳ್ಳಲಿರುವ ಬ್ಯಾಂಕಿಂಗ್ ನೇಮಕಾತಿ ಪರೀಕ್ಷಾ ತರಬೇತಿಯ ಡೈಲಿ ಇವ್ನಿಂಗ್ ಬ್ಯಾಚ್ ಗೆ ಸೇರಬಯಸುವ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಪ್ರೈಮ್, ಗ್ರೇಸ್ ಮೇನರ್ ಬಿಲ್ದಿಂಗ್, ಲಯನ್ಸ್ ಭವನದ ಹತ್ತಿರ, ಬ್ರಹ್ಮಗಿರಿ ಕೇಂದ್ರ, ಅಥವಾ ಕರಾವಳಿ ಬೈಪಾಸ್ ಬಳಿಯ ರೀಗಲ್ ನೆಕ್ಸ್ಟ್ ಕಟ್ಟಡದಲ್ಲಿರುವ ಪ್ರೈಮ್ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ಸಂಸ್ಥೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

PRIME HAND BILL Prime new1IAS ADMISSION 2018

 

 

DSC_3849 - Copy

ಪ್ರೈಮ್ ಉಡುಪಿ :  ಐ.ಎ.ಎಸ್ ಅಭ್ಯರ್ಥಿಗಳಿಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ

 

ಉಡುಪಿ ಬ್ರಹ್ಮಗಿರಿಯಲ್ಲಿರುವ ಪ್ರಥ್ವಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಎಜ್ಯುಕೇಷನ್ (ಪ್ರೈಮ್) ಸಂಸ್ಥೆಯ ಐ.ಎ.ಎಸ್ ವಿದ್ಯಾರ್ಥಿಗಳಿಗೆ ಕಳೆದ ಬಾನುವಾರ ವಿಶೇಷ ಉಪನ್ಯಾಸ ಕಾರ್ಯಕ್ರಮವು ಜರಗಿತು.

ಅಂದು ಬೆಳಿಗ್ಗೆ 9.00 ರಿಂದ 12.00 ಗಂಟೆಯವರೆಗೆ ಐ.ಎ.ಎಸ್. ವಿದ್ಯಾರ್ಥಿಗಳ ಪ್ರಥಮ ತರಬೇತಿ ಭಾಗವಾಗಿ ವ್ಯಕ್ತಿತ್ವ ವಿಕಸನ ಮತ್ತು ಜೀವನದಲ್ಲಿ ಅದರ ಪಾತ್ರ ಎಂಬ ವಿಷಯದ ಬಗ್ಗೆ ಮುಖ್ಯ ಅಥಿತಿಗಳಾಗಿ ಬಾಗವಹಿಸಿದ ಖ್ಯಾತ ಕಾರ್ಪೊರೇಟ್ ತರಬೇತುದಾರ ಶ್ರೀ ಮುಕೇಶ್ ಶೆಣೈ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಾ ಮುಖ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ದೈರ್ಯವಾಗಿ ಎದುರಿಸಿ ಧನಾತ್ಮಕ ಚಿಂತನೆಗಳ ಮೂಲಕ ಸ್ರುಜನಾತ್ಮಕ ಹವ್ಯಾಸಗಳನ್ನು ಬೆಳೆಸಿಕೊಂಡು ಒತ್ತಡ ನಿರ್ವಹಣೆಯನ್ನು ನಿವಾರಿಸಿ ಮುನ್ನಡೆಯುವ ಬಗ್ಗೆ ಸಾಂದರ್ಬಿಕವಾಗಿ ಉದಾಹರಣೆ ಸಹಿತ ಮಾತನಾಡಿ ವಿದ್ಯಾರ್ಥಿಗಳಲ್ಲಿ ಅಜಾಗ್ರತ ಮನಸ್ಥಿತಿಯನ್ನು ಹೋಗಳಾಡಿಸಿ ಜಾಗ್ರತಗೊಳಿಸಲು ಪ್ರಯತ್ನಿಸಿದರು.

ಇತ್ತೀಚಿನ ದಿನಗಳಲ್ಲಿ ಯುವ ಉದ್ಯೋಗಾಕಾಂಕ್ಷಿಗಳಿಗೆ ಸೂಕ್ತ ಅವಕಾಶಗಳನ್ನು ಕಲ್ಪಿಸಿ ವಿವಿಧ ಹುದ್ದೆಗಳಿಗೆ ಸಮರ್ಪಕ ವ್ಯಕ್ತಿಗಳನ್ನು ಆರಿಸುವಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ಮಹತ್ವದ ಪಾತ್ರ ವಹಿಸುತ್ತವೆ.  ಇಂಥ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳು ಯಶಸ್ವಿಯಾಗಿ ಹೊರಬರಲು ಕಠಿಣ ಶ್ರಮ, ಸಮಯ ಪ್ರಜ್ಣೆ, ಅವಶ್ಯಕ ಪುಸ್ತಕಗಳನ್ನು ಆಯ್ಕೆ ಮಾಡಿ ಟಿಪ್ಪಣಿ ಮಾಡಿಕೊಳ್ಳುವುದು, ನಿರಂತರ ಕಲಿಕಾ ಶಕ್ತಿ ಜೊತೆಗೆ ಆತ್ಮವಿಶ್ವಾಸವನ್ನು ಮೈಗೂಡಿಸಿಕೊಂಡರೆ ಪರೀಕ್ಷೆಯನ್ನು ಸಮರ್ಥವಾಗಿ ಹಾಗೂ ಯಶಸ್ವಿಯಾಗಿ ಎದುರಿಸಲು ಸಾದ್ಯ ಎಂದ ಅವರು ಈ ಎಲ್ಲಾ ಅಂಶಗಳು ಇರಬೇಕಾದರೆ ಪರಿಪೂರ್ಣ ಹಾಗೂ ಪರಿಣಾಮಕಾರಿ ಮಾರ್ಗದರ್ಶನ ಅತ್ಯಗತ್ಯ ಎಂದು ಕರೆಯಿತ್ತರು. ಹಾಗೆನೇ ವಿದ್ಯಾರ್ಥಿಗಳಲ್ಲಿ ಸ್ಮರಣಶಕ್ತಿ ಹೆಚ್ಚಿಸಿಕೊಳ್ಳಲು ದ್ಯಾನದ ಪಾತ್ರ ಇದರ ಬಗ್ಗೆ ಮಾಹಿತಿ ನೀಡಿದರು.

ಶ್ರಿ. ಏಮ್. ಎಸ್.ಪೈ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಸಂಸ್ಥೆಯ ನಿರ್ದೇಶಕರಾದ ಪ್ರೊ.ರಾಧಾಕೃಷ್ಣ ಆಚಾರ್ಯ ಅತಿಥಿಗಳಿಗೆ ಹೂ ಗುಚ್ಚ ನೀಡಿ ಸ್ವಾಗತಿಸಿದರು, ಶ್ರೀ ಎ.ಪಿ.ಭಟ್, ಜಗಜ್ಜೀವನ್, ಶೈಲೇಸ್, ಅಖಿಲೇಶ್, ನಿಸ್ಸಾರ್, ಚಾಣಕ್ಯ, ಮುಖೇಶ್ ಉಪಸ್ಥಿತರಿದ್ದರು.

ವಿ.ಸೂ. 2016-17 ನೇ ಸಾಲಿನ ಕೆಂದ್ರೀಯ ಲೋಕಸೇವಾ ಆಯೋಗ (UPSC) ನಡೆಸುವ ನಾಗರಿಕ ಸೇವಾ (IAS) ಪರೀಕ್ಷೆಯಲ್ಲಿ 37 ನೇ ಸ್ಥಾನ ಪಡೆದ ಬಂಟ್ವಾಳ ತಾಲೂಕಿನ ಶ್ರೀ ನವೀನ್ ಭಟ್ ಇವರು ಬರುವ ಶನಿವಾರ ಮದ್ಯಾಹ್ನ 2.00-3.30 ರವರೆಗೆ ಉಡುಪಿ ಬ್ರಹ್ಮಗಿರಿಯ ಪ್ರೈಮ್ ಸಂಸ್ಥೆಯ ಸಬಾಂಗಣದಲ್ಲಿ ಐ.ಎ.ಎಸ್. ಆಕಾಂಕ್ಷಿಗಳೊಂದಿಗೆ ದೇಶದ ಪ್ರತಿಷ್ಟಿತ ಐ.ಎ.ಎಸ್. ಪರೀಕ್ಷೆಯ ಬಗ್ಗೆ ಸಂವಾದ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಆಸಕ್ತರು ಈ ಕಾರ್ಯಕ್ರಮದಲ್ಲಿ ಬಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ ಪ್ರೈಮ್, ಗ್ರೇಸ್ ಮೇನರ್ ಬಿಲ್ದಿಂಗ್, ಲಯನ್ಸ್ ಭವನದ ಹತ್ತಿರ, ಬ್ರಹ್ಮಗಿರಿ, ಉಡುಪಿ. ಇಲ್ಲಿಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ನಿರ್ಧೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

 

 

 

PRIME IAS 2017 Batch innauguration (1)

ಪ್ರೈಮ್ ಉಡುಪಿ : ಐ.ಎ.ಎಸ್ / ಕೆ.ಎ.ಎಸ್ ತರಬೇತಿ ತರಗತಿ ಉದ್ಘಾಟಣೆ

ಉಡುಪಿಯ ಪ್ರೈಮ್ ಸಂಸ್ಥೆಯ 2017-18 ನೇ ಸಾಲಿನ ಐ ಎ ಎಸ್ ತರಬೇತಿಯ ನೂತನ ಬ್ಯಾಚನ್ನು ಕಳೆದ ಸಾಲಿನ ಐ.ಎ.ಎಸ್ ಪರೀಕ್ಷೆಯಲ್ಲಿ 112 ನೇ Rank ನಲ್ಲಿ ತೇರ್ಗಡೆ ಹೊಂದಿದ ಉಡುಪಿಯ ಶ್ರಿ. ರಂಜನ್ ಅರ್ ಶೆಣೈ ಹಾಗೂ ಕಳೆದ ಸಾಲಿನ ಕೆ.ಎ.ಎಸ್ ಪರೀಕ್ಷೆಯಲ್ಲಿ 7 ನೇ Rank ನಲ್ಲಿ ತೇರ್ಗಡೆ ಹೊಂದಿದ ಡಾII ಯತೀಶ್ ಉಲ್ಲಾಲ್ ಇವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

 

ಉಡುಪಿ ಬ್ರಹ್ಮಗಿರಿಯ ಪ್ರೈಮ್ ಸಂಸ್ಥೆಯ ಸಭಾಂಗಣದಲ್ಲಿ ಕಳೆದ ಬಾನುವಾರದಂದು ಜರಗಿದ ಈ ಕಾರ್ಯಕ್ರಮದಲ್ಲಿ ಐ ಎ ಎಸ್ ಆಕಾಂಕ್ಷಿಗಳನ್ನು ಉದ್ದೇಶಿಸಿ ಮೊದಲಿಗೆ ಮಾತನಾಡಿದ ಶ್ರಿ. ರಂಜನ್ ಅರ್ ಶೆಣೈ “ಸಿವಿಲ್ ಸರ್ವೀಸಸ್” ಐ.ಎ.ಎಸ್ ಪರೀಕ್ಷೆಯ ಪೂರ್ವ ತಯಾರಿಯ ಬಗ್ಗೆ ವಿವರವಾಗಿ ತಿಳಿಸುತ್ತಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ನಿರಂತರ ಕಲಿಕೆಯಿಂದ ಮಾತ್ರ ಸಾದ್ಯ, ಈ ದಿಶೆಯಲ್ಲಿ ಎನ್.ಸಿ.ಇ.ಅರ್.ಟಿ. ಪುಸ್ತಕಗಳು, ಆಂಗ್ಲ ದಿನಪತ್ರಿಕೆ, ನಿರಂತರ ಓದುವ ಮತ್ತು ಬರೆಯುವ ಹವ್ಯಾಸ, ಸಂವಹನ ಕಲೆ ಮಾತ್ರವಲ್ಲದೆ ಸದಾ ನಿಮ್ಮ ಕನಸುಗಳು ಮತ್ತು ಯೋಜನೆಗಳನ್ನು ಸಮರ್ಥಿಸುವ ಮತ್ತು ಪೋಶಿಸುವ ಸ್ನೇಹಿತರನ್ನು ಆಯ್ಕೆ ಮಾಡಿಕೊಂಡರೆ ಗೆಲುವು ನಿರೀಕ್ಷಿತ ಎಂದು ಕರೆಯಿತ್ತರು. ಹಾಗೆನೇ ಕೆಲವು ಬೇಸಿಕ್ಸ್ ಪಠ್ಯ ಪುಸ್ತಕಗಳು ಹಾಗೂ ಆನ್ ಲೈನ್ ವೆಬ್ ಸೈಟ್ ಗಳ ಬಗ್ಗೆ ಮಾಹಿತಿ ನೀಡಿ ಅದರ ಸದೂಪಯೋಗ ಪಡೆದುಕೊಳ್ಳುವಂತೆ ಹೇಳಿದರು. ತದನಂತರ ಮಾತನಾಡಿದ ಡಾII ಯತೀಶ್ ಉಲ್ಲಾಲ್ ರವರು ಐ.ಎ.ಎಸ್ / ಕೆ ಎ ಎಸ್ ಪರೀಕ್ಷೆಗಳಲ್ಲಿ ಪರೀಕ್ಷಾರ್ಥಿಗಳು ಬರವಣಿಗೆ ಮೂಲಕ ವಿವರಣಾತ್ಮಕವಾಗಿ ಹಾಗೂ ಸವಿಸ್ಥಾರವಾಗಿ ಬರೆಯುವ ಮತ್ತು ಸ್ವ ಸಾಮರ್ಥ್ಯ ಬೆಳವಣಿಗೆಯನ್ನು ರೂಡಿಸಿಕೊಳ್ಳುವ ಬಗ್ಗೆ ಹಾಗೂ ದೈನಂದಿನ ಪತ್ರಿಕೆಯ ಪ್ರಚಲಿತ ವಿದ್ಯಮಾನಗಳ ಮುಖ್ಯ ವಿಷಯಗಳನ್ನು ಟಿಪ್ಪಣಿ ಮಾಡಿ ಅದರ ಬಗ್ಗೆ ಗುಂಪು ಚರ್ಚೆ ಮೈಗೂಡಿಸಿಕೊಂಡು ಅದನ್ನು ಪರೀಕ್ಷೆಯಲ್ಲಿ ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಮನದಟ್ಟುಮಾಡಿದರು.

 

ಸಂಸ್ಥೆಯ ಸ್ಥಾಪಕ ಶ್ರಿ ರತ್ನಕುಮಾರ್ ಅತಿಥಿಗಳಿಗೆ ಹೂ ಗುಚ್ಚ ನೀಡಿ ಸ್ವಾಗತಿಸಿದರು, ಸಂಸ್ಥೆಯ ನಿರ್ದೇಶಕರಾದ ಪ್ರೊ.ರಾಧಾಕೃಷ್ಣ ಆಚಾರ್ಯ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಶ್ರಿ. ರಘುಪತಿ ರಾವ್, ವಿಠಲ್ ಭಟ್ ಈ ಸಭಾಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕರುಗಳಾದ ಗೋಪಾಲಕೃಷ್ಣ ಸಾಮಗ, ಸುರೇಂದ್ರನಾಥ್ ಶೆಟ್ಟಿ, ಶೈಲೇಶ್, ಪ್ರಶಾಂತ್, ಜಗಜ್ಜೀವನ್, ಅಖಿಲೇಶ್, ನಿಸ್ಸಾರ್, ಚಾಣಕ್ಯ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಶ್ರಿ ಎಮ್. ಎಸ್. ಪೈ ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ಶ್ರಿ ಎ.ಪಿ.ಭಟ್ ವಂದನಾರ್ಪಣೆಗೈದರು.

 

2017-18 ನೇ ಸಾಲಿನ ಐ.ಎ.ಎಸ್. ಬ್ಯಾಚ್ ಇದೇ ಬರುವ ಜುಲೈ 29 ರಂದು ಪ್ರಾರಂಭಗೊಳ್ಳಲಿದ್ದು, 500 ಗಂಟೆಗಳ ಈ ತರಬೇತಿ ಪ್ರತೀ ಶನಿವಾರ 2.30 – 5.30 ಗಂಟೆಯವರೆಗೆ ಹಾಗೂ ಪ್ರತೀ ಬಾನುವಾರ ಬೆಳಿಗ್ಗೆ 9.00 – 5.30 ಗಂಟೆಯವರೆಗೆ ನಡೆಯಲಿದ್ದು, 2018 ರ ಮೇ ತಿಂಗಳಿನಲ್ಲಿ ಅಂತ್ಯಗೊಳ್ಳಲಿದೆ. ಆಸಕ್ತರು ಹೆಚ್ಚಿನ ಮಾಹಿತಿಗೆ ಪ್ರೈಮ್, ಗ್ರೇಸ್ ಮೇನರ್ ಬಿಲ್ದಿಂಗ್, ಲಯನ್ಸ್ ಭವನದ ಹತ್ತಿರ, ಬ್ರಹ್ಮಗಿರಿ, ಉಡುಪಿ. ದೂ. 0820-4293422 ಇಲ್ಲಿಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ನಿರ್ಧೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

 

 

Prime ad (1)

 

 

 

Prime ad 7.4 x 9 revised

 

 

ಪ್ರೈಮ್ ಉಡುಪಿ : ಐ.ಎ.ಎಸ್ / ಕೆ.ಎ.ಎಸ್ ತರಬೇತಿಗೆ ಪ್ರವೇಶ ಪರೀಕ್ಷೆ

ಪ್ರೈಮ್ ಸಂಸ್ಥೆಯು 2018 ರ ಐ.ಎ.ಎಸ್ / ಕೆ.ಎ.ಎಸ್ ಪರೀಕ್ಷೆಗೆ ತರಬೇತಿ ಪಡೆಯಲಿಚ್ಹಿಸುವ ಅಭ್ಯರ್ಥಿಗಳಿಗಾಗಿ ಪ್ರವೇಶ ಪರೀಕ್ಷೆಯನ್ನು ಇದೇ ಬರುವ ಜುಲೈ 16, ಬಾನುವಾರದಂದು ಉಡುಪಿ, ಬ್ರಹ್ಮಗಿರಿಯ ಪ್ರೈಮ್ ಕೇಂದ್ರದಲ್ಲಿ ನಡೆಸಲಿದೆ.

 

ಅಂದು ಬೆಳಿಗ್ಗೆ 10.00 ರಿಂದ 12.00 ಗಂಟೆಯವರೆಗೆ ನಡೆಯಲಿರುವ 2 ಗಂಟೆ ಅವಧಿಯ 200 ಅಂಕಗಳ ಬಹುಆಯ್ಕೆಯ ಪ್ರಶ್ನೆ ಪತ್ರಿಕೆಗಳನ್ನೊಳಗೊಂಡ ಈ ಪರೀಕ್ಷೆಯು ಐ.ಎ.ಎಸ್ ಪ್ರಿಲಿಮಿನರಿ ಪರೀಕ್ಷೆಯ ಮುಖ್ಯ ವಿಷಯಗಳಾದ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಭೂಗೋಳಶಾಸ್ತ್ರ, ಪ್ರಚಲಿತ ವಿದ್ಯಮಾನ, ಗಣಿತ, ವಿಜ್ನಾನ, ರೀಸನಿಂಗ್, ಇಂಗ್ಲೀಷ್ ಮುಂತಾದ ವಿಷಯಗಳಿಗೆ ಸಂಬಂದಿಸಿದಂತೆ ಪರೀಕ್ಷೆಯು ನಡೆಯಲಿದೆ.

 

ಪದವೀಧರರು ಹಾಗೂ ಅಂತಿಮ ವರ್ಷದ ಪದವೀಧರ ಅಭ್ಯರ್ಥಿಗಳಿಗೆ ಈ ಪ್ರವೇಶ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ.

 

ತದನಂತರ ಜುಲೈ 23 ರಿಂದ ಆರಂಭಗೊಳ್ಳಲಿರುವ  ಈ ತರಬೇತಿ ಪ್ರತೀ ಶನಿವಾರ ಮಧ್ಯಾಹ್ನ 2.30 ರಿಂದ 5.30 ರವರೆಗೆ ಹಾಗೂ ಪ್ರತೀ ಬಾನುವಾರ ಬೆಳಿಗ್ಗೆ 9.00 ರಿಂದ 5.30 ರ ತನಕ ಸಾಗುವ 1 ವರ್ಷ ಅವಧಿಯ 500 ಗಂಟೆಗಳ ಈ ತರಬೇತಿ 2018 ರ ಮೇ ತಿಂಗಳಿನಲ್ಲಿ ಅಂತ್ಯಗೊಳ್ಳಲಿದೆ. ಈ ತರಬೇತಿ ಐ.ಎ.ಎಸ್ ಪ್ರಿಲಿಮಿನರಿ ಪರೀಕ್ಷೆಯ ಪೇಪರ್ 1 ಮತ್ತು ಪೇಪರ್ 2, ಹಾಗೂ ಮೈನ್ಸ್ ಪರೀಕ್ಷೆಯ ಜನರಲ್ ಸ್ಟಡೀಸ್, ಎಥಿಕ್ಸ್ ವಿಷಯಗಳಿಗೆ ಸಂಬಂದಿಸಿದಂತೆ ತರಗತಿಗಳು ನಡೆಯಲಿದ್ದು, ತರಬೇತಿಯ ಅಂತ್ಯದಲ್ಲಿ ಪ್ರಿಲಿಮಿನರಿ ಪತ್ರಿಕೆಯ ಟೆಸ್ಟ್ ಸೀರಿಸ್ ಮತ್ತು ಅದರ ಡಿಸ್ಕಸನ್ ನಡೆಯಲಿದೆ. ವಾರದ ದಿನಗಳಲ್ಲಿ ಬೆಳಿಗ್ಗೆ 9.30 ರಿಂದ 5.30 ರ ತನಕ ಐ ಎ ಎಸ್ ಪರೀಕ್ಷೆಗೆ ಸಂಬದಿಸಿದ ಗ್ರಂಥಾಲಯದ ಉಪಯೋಗ, ಹಾಗೂ ಇಂಟರ್ ನೆಟ್ ಸೌಲಭ್ಯವನ್ನು ಅಭ್ಯರ್ಥಿಗಳಿಗೆ ಕಲ್ಪಿಸಲಾಗಿದೆ.

 

ಸಂಸ್ಥೆಯು ಈ ತರಬೇತಿಯಲ್ಲಿ ಉತ್ತಮ ಶಿಕ್ಷಕ ವ್ರಂದ, ವಿದೇಶಿ ಲೇಖಕರು ಬರೆದ ವಿಶೇಷ ಗುಣಮಟ್ಟದ ಗ್ರಂಥಾಲಯ ವ್ಯವಸ್ಥೆಯನ್ನು ಅಭ್ಯರ್ಥಿಗಳಿಗೆ ಕಲ್ಪಿಸಿಕೊಡಲಾಗುವುದು ಹಾಗೂ ಪ್ರೈಮ್ ಸ್ಟಡಿ ಮೆಟೀರಿಯಲ್ ಜೊತೆಗೆ ಹಿಂದಿನ 23 ವರ್ಷದ ಕೀ ಉತ್ತರ ಸಹಿತ ಪ್ರಶ್ನೆಪತ್ರಿಕೆಯ ಪುಸ್ತಕವನ್ನು ಅಭ್ಯರ್ಥಿಗಳಿಗೆ ಉಚಿತವಾಗಿ ಸಂಸ್ಥೆಯ ವತಿಯಿಂದ ನೀಡಲಾಗುವುದು.

 

ಐ.ಎ.ಎಸ್ ತರಬೇತಿಗೆ ಸೇರಬಯಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಜುಲೈ 16, ಬಾನುವಾರದಂದು ನಡೆಯಲಿರುವ ಪ್ರವೇಶ ಪರೀಕ್ಷೆ ಬರೆಯತಕ್ಕದ್ದು. ಆಸಕ್ತರು ಹೆಚ್ಚಿನ ಮಾಹಿತಿಗೆ ಪ್ರೈಮ್, ಲಯನ್ಸ್ ಭವನದ ಹತ್ತಿರ, ಬ್ರಹ್ಮಗಿರಿ, ಉಡುಪಿ. ದೂರವಾಣಿ : 0820-4293422 ನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಕೆ ಎ ಎಸ್-2017 ಪರೀಕ್ಷೆ-1